ಒಂದು ಹಾವಿನ ಕಥೆ
ಬರಹಗಾರ. ಲಕ್ಷ್ಮಣ ರಾಟಿಮನಿ ಒಂದು ರಾತ್ರಿಯಲ್ಲಿ (ಕಮ್ಮಾರ) ಬಡಿಗನ ಅಂಗಡಿಯಲ್ಲಿ ಒಂದು ಹಾವು ಬಂದಿತ್ತು ಅದು ಕತ್ತಲೆಯಲ್ಲಿ ಹರಿದಾಡುತ್ತ ಗರಗಸದ ಹತ್ತಿರ ಸುಳಿಯಿತು, ಗರಗಸದ ಒಂದು ಚೂಪಾದ ಹಲ್ಲು ಹಾವಿನ ಬಾಲಕ್ಕೆ ತಾಗಿತ್ತು ಸ್ವಲ್ಪ ಗಾಯವು ಆಯಿತು ತಕ್ಷಣವೇ ಅದು ತಿರುಗಿ ಗರಗಸವನ್ನು ಕಡೆಯಲು ಪ್ರಯತ್ನಿಸಿತು. ಇದರಿಂದ ಹಾವಿನ ಬಾಯಿಗೆ ಗಾಯವಾಯಿತು ಗಾಯದಿಂದ ವಿಚಲಿತವಾದ ಹಾವು ಕೋಪದಲ್ಲಿ ಏನು ನಡೆಯುತ್ತಿದೆ ಎಂದು ಸರಿಯಾಗಿ ತಿಳಿಯದೆ ಗರಗಸ ತನ್ನನ್ನು ಕಚ್ಚುತ್ತಿದೆ ಎಂದು ಭಾವಿಸಿತು. ಗಗರಗಸವನ್ನು ಉಸಿರುಗಟ್ಟಿಸಿ ಸಾಯಿಸುವ ಉದ್ದೇಶದಿಂದ ಗರಗಸವನ್ನು ಸುತ್ತಿಕೊಳ್ಳಲು ಶುರುಮಾಡಿತು ಗಾಯ ಹೆಚ್ಚಾದಂತೆ ಗರಗಸವನ್ನು ಮತ್ತಷ್ಟು ಶಕ್ತಿಮೀರಿ ಸುತ್ತಿಕೊಂಡಿತ್ತು ಆದರೆ ಮೈಯೆಲ್ಲಾ ಗಾಯವಾಗಿದ್ದು ಹಾವಿಗೆ ಹೊರತು ಗರಗಸಕ್ಕೆ ಏನು ಆಗಲಿಲ್ಲ ಅತಿಯಾದ ರಕ್ತಸ್ರಾವದಿಂದ ಹಾವು ಸತ್ತುಹೋಯಿತು. ನೀತಿ:: ಹೀಗೆ ಒಮ್ಮೊಮ್ಮೆ ನಮಗೆ ತೊಂದರೆ ಮಾಡಿದವರನ್ನು ಶಿಕ್ಷಿಸುವ ಭರದಲ್ಲಿ ನಾವು ಉದ್ವೇಗಕೊಳ್ಳುತ್ತೇವೆ. ಕೋಪದಲ್ಲಿ ಪ್ರತಿಕ್ರಿಯಿಸಿ ಅವರಿಗೆ ಹಾನಿಮಾಡಲು ಪ್ರಯತ್ನಿಸುತ್ತೇವೆ. ಆದರೆ ನಿಜವಾಗಿಯೂ ನಾವು ನಮಗೆ ಶಿಕ್ಷಿಸಿಕೊಂಡಿರುತ್ತೇವೆ ನಮಗಾಗದ ವ್ಯಕ್ತಿಗಳನ್ನು ಕೆಲ ಅಹಿತಕರ ಘಟನೆಗಳನ್ನು ನಿರ್ಲಕ್ಷಿಸುವುದು ಒಳ್ಳೆಯದು ಅಸೂಯೆ ದ್ವೇಷ ಇವಕ್ಕಿಂತ ಪ್ರೀತಿ ಸಹ...