Posts

ಸಂಸತ್ತುಗಳ ಬಗ್ಗೆ ಮಾಹಿತಿ

 ಯಾವ ದೇಶದಲ್ಲಿ ಅತ್ಯಂತ ವೈಭವೋಪೇತ ಸಂಸತ್‌ ಕಟ್ಟಡ ನಿರ್ಮಾಣ ಮಾಡಲಾಗಿದೆ? ಪ್ಯಾಲೇಸ್‌ ಆಫ್ ಪಾರ್ಲಿಮೆಂಟ್‌ ಇದು ರೊಮೇನಿಯಾ ದೇಶದ ಸಂಸತ್‌ ಭವನ. 1984ರ ಜೂ.25ರಂದು ಈ ಕಟ್ಟಡ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈ ಕಟ್ಟಡದ ವಿನ್ಯಾಸ ಮಾಡಿದ್ದು ಖ್ಯಾತ ವಾಸ್ತುಶಿಲ್ಪಿ ಅನ್ಕಾ ಪೆಟ್ರೆಸ್ಕಾ. ಅಷ್ಟೇ ಅಲ್ಲ, ವಿನ್ಯಾಸಕ್ಕಾಗಿಯೇ 700ಕ್ಕೂ ಹೆಚ್ಚು ವಾಸ್ತುಶಿಲ್ಪಿಗಳು ಕೈಜೋಡಿಸಿದ್ದರು. 13 ವರ್ಷಗಳ ಕಾಲ ಈ ಕಟ್ಟಡದ ನಿರ್ಮಾಣವಾಗಿತ್ತು. ಅಂದ ಹಾಗೆ, ಇದು ಜಗತ್ತಿನಲ್ಲೇ ಎರಡನೇ ಅತೀ ದೊಡ್ಡ ಪಾರ್ಲಿಮೆಂಟ್‌ ಕಟ್ಟಡ. 2020ರ ಅಂದಾಜಿನಂತೆ ಈ ಕಟ್ಟಡದ ಮೌಲ್ಯ 35 ಸಾವಿರ ಕೋಟಿ ರೂ. ಹೀಗಾಗಿ ಜಗತ್ತಿನ ಅತ್ಯಂತ ದುಬಾರಿ ಕಟ್ಟಡ ಎಂಬ ಖ್ಯಾತಿಗೂ ಇದು ಪಾತ್ರವಾಗಿದೆ. ವಿಶೇಷವೆಂದರೆ ಹೀಟಿಂಗ್‌, ಎಲೆಕ್ಟ್ರಿಸಿಟಿ ಮತ್ತು ಲೈಟಿಂಗ್‌ಗೇ ವಾರ್ಷಿಕ 49.53 ಕೋಟಿ ರೂ. ಬೇಕಾಗುತ್ತದೆ.   ನ್ಯಾಶನಲ್‌ ಡಯಟ್‌ ಬಿಲ್ಡಿಂಗ್‌ ಜಪಾನ್‌ನ ಪಾರ್ಲಿಮೆಂಟ್‌ ಹೌಸ್‌ ಇದು. ಇದರಲ್ಲಿ ಎರಡು ಹೌಸ್‌ಗಳಿವೆ. 1920ರ ಜ.30ರಂದು ಈ ಕಟ್ಟಡ ಕಟ್ಟಲು ಆರಂಭಿಸಲಾಗಿದ್ದು, 1936ರ ನವೆಂಬರ್‌ 7ರಂದು ಮುಗಿದಿತ್ತು. ಅಷ್ಟೇ ಅಲ್ಲ, ಇದು 1936ರಿಂದ 1964ರ ವರೆಗೆ ಜಪಾನ್‌ನ ಅತ್ಯಂತ ಎತ್ತರದ ಕಟ್ಟಡ ಎಂಬ ಖ್ಯಾತಿಗೂ ಪಾತ್ರವಾಗಿತ್ತು. ಗ್ಲಾಸ್‌, ಡೋರ್‌ ಲಾಕ್‌, ನ್ಯೂಮ್ಯಾಟಿಕ್‌ ಟ್ಯೂಬ್‌ ಸಿಸ್ಟಮ್‌ ಬಿಟ್ಟರೆ, ಈ ಕಟ್ಟಡವನ್ನು ಜಪಾನ್‌ ದೇಶದ ವಸ್ತುಗಳನ್ನು ಬಳಸಿ...

Death Roads

  ಪ್ರ ಪಂಚದಲ್ಲಿ ಕೆಲವೊಂದು ರಸ್ತೆಗಳು ಹೆಚ್ಚು ಕಡಿದಾಗಿದ್ದು, ಹೆಚ್ಚು ತಿರುವುಗಳಿಂದ ಕೂಡಿದ್ದು ಡೇಂಜರಸ್ ಆಗಿರುತ್ತವೆ. ಅದರಲ್ಲೂ ವಿಶ್ವದ ಅತ್ಯಂತ ಅಪಾಯಕಾರಿ ರೋಡ್ ಎಂದು ಗುರುತಿಸಿಕೊಂಡಿರೂ ನಾರ್ತ್‌ ಯುಂಗಾಸ್ ರಸ್ತೆ ಒಮ್ಮೆ ಪ್ರತಿ ವರ್ಷ 200-300 ಪ್ರಯಾಣಿಕರ ಸಾವಿಗೆ ಕಾರಣವಾಗುತ್ತೆ ಅನ್ನೋ ವಿಷ್ಯ ನಿಮಗೆ ಗೊತ್ತಿದ್ಯಾ?   ಟ್ರಾವೆಲಿಂಗ್‌ ಬಹುತೇಕರಿಗೆ ಇಷ್ಟವಾಗುತ್ತದೆ. ಆದರೆ ರಸ್ತೆ ಪ್ರಯಾಣವಾದರೆ ರೋಡ್‌ ಚೆನ್ನಾಗಿದ್ದರಷ್ಟೇ ಟ್ರಾವೆಲಿಂಗ್ ಮಾಡಿದ ಅನುಭವ ಚೆನ್ನಾಗಿರುತ್ತದೆ. ಪ್ರಪಂಚದಲ್ಲಿ ಕೆಲವೊಂದು ರಸ್ತೆಗಳು ಹೆಚ್ಚು ಕಡಿದಾಗಿದ್ದು, ಹೆಚ್ಚು ತಿರುವುಗಳಿಂದ ಕೂಡಿದ್ದು ಡೇಂಜರಸ್ ಆಗಿರುತ್ತವೆ. ಅದರಲ್ಲೂ ವಿಶ್ವದ ಅತ್ಯಂತ ಅಪಾಯಕಾರಿ ರೋಡ್ ಎಂದು ಗುರುತಿಸಿಕೊಂಡಿರೂ ನಾರ್ತ್‌ ಯುಂಗಾಸ್ ರಸ್ತೆ ಒಮ್ಮೆ ಪ್ರತಿ ವರ್ಷ 200-300 ಪ್ರಯಾಣಿಕರ ಸಾವಿಗೆ ಕಾರಣವಾಗುತ್ತಿದೆ ಅನ್ನೋ ವಿಷ್ಯ ನಿಮಗೆ ಗೊತ್ತಿದ್ಯಾ?   1930ರ ದಶಕದಲ್ಲಿ ಪರಾಗ್ವೆ ಮತ್ತು ಬ್ರೆಜಿಲ್ ನಡುವೆ ನಡೆದ ಚಾಕೊ ಯುದ್ಧದ ಸಮಯದಲ್ಲಿ ಸೆರೆಯಾಳಾಗಿದ್ದ ಪರಾಗ್ವೆಯ ಕೈದಿಗಳಿಂದ ಈ ರಸ್ತೆಯನ್ನು ನಿರ್ಮಿಸಲಾಗಿದೆ. ಪರ್ವತಗಳನ್ನು ಕಡಿದು ತಯಾರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ರಸ್ತೆಯು ಬೊಲಿವಿಯಾದ ರಾಜಧಾನಿಯಾದ ಲಾ ಪಾಜ್ ಅನ್ನು ಕೊರೊಯಿಕೊದ ತಗ್ಗು ಪಟ್ಟಣದೊಂದಿಗೆ ಸಂಪರ್ಕಿಸುತ್ತದೆ. ಇದು ವ್ಯಾಪಾರಿಗಳಿಗೆ ಅಮೆಜಾನ್ ಮಳೆಕಾಡಿನಿಂದ ಹಳ್ಳಿಗಳಿಗೆ ಷಟಲ್ ಮ...

ವಿಚಿತ್ರವಾದರು ನಿಜಾ

 ಜಗತ್ತಿನಲ್ಲಿ ಕೆಲವೊಂದು ಚಿತ್ರ-ವಿಚಿತ್ರ ರೆಸ್ಟೋರೆಂಟ್‌ಗಳಿವೆ. ಅವುಗಳ ಪರಿಚಯವನ್ನು ಇಲ್ಲಿ ಮಾಡಲಾಗಿದೆ. ಲ್ಯಾಟೆಕ್ಸ್‌, ಬ್ಯಾಂಕಾಕ್, ಥೈಲ್ಯಾಂಡ್ ಇಲ್ಲಿ ಕಾಂಡೋಮ್‌ಗೆ ಹೆಚ್ಚಿನ ಬೇಡಿಕೆ. ಊಟದ ನಂತರ ಪಾನ್‌ ಅಥವಾ ಮಿಂಟ್‌ ಬದಲು ಇಲ್ಲಿ ಕಾಂಡೋಮ್ ನೀಡಲಾಗುತ್ತದೆ  ತೈಪೆ, ತೈವಾನ್: ಇಲ್ಲಿ ಟಾಯ್ಲೆಟ್‌ಗಳು ಟೈಲ್ಡ್ ಗೋಡೆಗಳ ಮೇಲೆ ನೇತಾಡುತ್ತವೆ, ಊಟದ ತಟ್ಟೆಗಳು ಟಾಯ್ಲೆಟ್ ಬೌಲ್‌ಗಳ ಆಕಾರದಲ್ಲಿರುತ್ತವೆ. ತಿನ್ನಲು ಅಸಹ್ಯ ಎನಿಸಿದರೂ ಇದನ್ನು ಸವಿಯಲು ಹಲವರು ಬರುತ್ತಾರೆ. ವೋಲ್ಟೆರಾ, ಇಟಲಿ ಇಟಲಿಯ ವೋಲ್ಟೆರಾನಲ್ಲಿರುವ ಫೋರ್ಟೆಝಾ ಮೆಡಿಸಿಯಾ ರೆಸ್ಟೋರೆಂಟ್‌ ಜೈಲಿನ ಫೀಲ್‌ ಈ ರೆಸ್ಟೋರೆಂಟ್‌ನಲ್ಲಿ ನೀಡಲಾಗುತ್ತದೆ. ಕೈದಿಗಳಿಂತೆ ಇಲ್ಲಿ ಕಂಬಿಯ ಹಿಂದೆ ಊಟ ನೀಡಲಾಗುತ್ತದೆ. ಟೋಕಿಯೋ, ಜಪಾನ್ ಜಪಾನ್‌ನ ಟೋಕಿಯೋದಲ್ಲಿರುವ ಕ್ರಿಸ್ಟನ್ ಕೆಫೆಯಲ್ಲಿ ದೈತ್ಯ ಶಿಲುಬೆ ಇದೆ. ಇಲ್ಲಿ ಶವ ಪೆಟ್ಟಿಗೆ ಆಕಾರದ ಪೆಟ್ಟಿಗೆ ಇದ್ದು, ಅಲ್ಲಿ ಆಹಾರ ಸರಬರಾಜು ಮಾಡಲಾಗುತ್ತದೆ. ಬಣ್ಣದ ಗಾಜಿನ ಕಿಟಕಿಗಳು ಮತ್ತು ವಿಲಕ್ಷಣವಾದ ಬೈಬಲ್ ಇದ್ದು, ಗೋರಿಯ ಒಳಗೆ ಊಟ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ. ಲಾಸ್ ವೇಗಾಸ್, ಅಮೆರಿಕ ಅಮೆರಿಕದ ಲಾಸ್ ವೇಗಾಸ್‌ನಲ್ಲಿರುವ ಹಾರ್ಟ್ ಅಟ್ಯಾಕ್ ಗ್ರಿಲ್ ರೆಸ್ಟೋರೆಂಟ್‌ನಲ್ಲಿ ಆಹಾರ ಪೂರೈಸುವವರು ಮಾದಕ ಮಹಿಳೆಯರಾಗಿರುತ್ತಾರೆ. ಅವರು ಅಂಥದ್ದೇ ಡ್ರೆಸ್‌ ಧರಿಸಿ ಆಹಾರ ಪೂರೈಸಿದರೆ ಇದು ಹಲವರ ರಕ್ತದೊತ್ತಡವನ್ನು ಏರಿಸುತ್ತ...

ಗ್ರೀನ್ ಟೀ ಉಪಯೋಗಗಳು

Image
  ಹ ಸಿರು ಚಹಾವು( ಗ್ರೀನ್ ಟೀ) ಶತಮಾನಗಳಿಂದ ಅನೇಕ ಸಂಸ್ಕೃತಿಗಳಲ್ಲಿ ಪ್ರಧಾನವಾಗಿದೆ. ಅದರ ರಿಫ್ರೆಶ್ ರುಚಿ ಮತ್ತು ಸಂಭಾವ್ಯ ಆರೋಗ್ಯ ಪ್ರಯೋಜನಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದ್ದು, ಗ್ರೀನ್ ಟೀ ಕುಡಿಯುವುದರಿಂದಾಗು ಪ್ರಯೋಜನಗಳು ಇಲ್ಲಿವೆ.  ಹಸಿರು ಚಹಾವು(  ಗ್ರೀನ್ ಟೀ ) ಶತಮಾ ನಗಳಿಂದ ಅನೇಕ ಸಂಸ್ಕೃತಿಗಳಲ್ಲಿ ಪ್ರಧಾನವಾಗಿದೆ. ಅದರ ರಿಫ್ರೆಶ್ ರುಚಿ ಮತ್ತು ಸಂಭಾವ್ಯ ಆರೋಗ್ಯ ಪ್ರಯೋಜನಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದೆ. ಆದರೆ ರುಚಿಯನ್ನು ಮೀರಿ, ಗ್ರೀನ್ ಟೀ ಕುಡಿಯುವುದರಿಂದ ನಿಮಗೆ ತಿಳಿದಿರದ ಹಲವಾರು ಆಶ್ಚರ್ಯಕರ ಪ್ರಯೋಜನಗಳಿವೆ. ಗ್ರೀನ್ ಟೀ ಕುಡಿಯುವುದರಿಂದ ಕೆಲವು ಆಶ್ಚರ್ಯಕರ ಪ್ರಯೋಜನಗಳಾಗುತ್ತದೆ. ಅದನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು. ಗ್ರೀನ್ ಟೀ ಕುಡಿಯುವುದರಿಂದಾಗುವ ಪ್ರಯೋಜನಗಳು ನೀವು ತಿಳಿದುಕೊಳ್ಳಬೇಕಾದ ಹಸಿರು ಚಹಾದ(ಗ್ರೀನ್ ಟೀ) ಆಶ್ಚರ್ಯಕರ ಪ್ರಯೋಜನಗಳನ್ನು ಕೆಳಗೆ ನೀಡಲಾಗಿದೆ. 1. ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ(Boosts Brain Function) ಗ್ರೀನ್ ಟೀ ಕುಡಿಯುವ ಅತ್ಯಂತ ಆಶ್ಚರ್ಯಕರ ಪ್ರಯೋಜನವೆಂದರೆ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಹಸಿರು ಚಹಾವು ಕೆಫೀನ್ ಅನ್ನು ಹೊಂದಿರುತ್ತದೆ. ಇದು ಜಾಗರೂಕತೆ ಮತ್ತು ಗಮನವನ್ನು ಸುಧಾರಿಸುತ್ತದೆ. ಆದರೆ ಇದು ಎಲ್ ಥಿಯಾನೈನ್ ಎಂಬ ವಿಶಿಷ್ಟ ಸಂಯುಕ್ತವನ್ನು ಹೊಂದಿದೆ. ಇದು ಆಲ್ಫಾ ಮೆದುಳಿನ ಅಲೆಗಳನ್...

ಹಣ ಗಳಿಸುವ 10 ಮಾರ್ಗಗಳು

 ನೀವು ಶ್ರೀಮಂತರಾಗಬೇಕಾ ? ಹಾಗಾದರೆ ನಿಮಗೆ ಹಣಕಾಸಿನ ಅರಿವು ತುಂಬಾ ಮುಖ್ಯ. ಹಣಕಾಸಿನ ಅರಿವು ಎಂಬುದು ವಿವಿಧ ಹಣಕಾಸಿನ ಕೌಶಲ್ಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯವಾಗಿದೆ. ಇದರಲ್ಲಿ ಬಜೆಟ್, ನಿವೃತ್ತಿ ಯೋಜನೆಗಳು, ಸಾಲವನ್ನು ನಿರ್ವಹಿಸುವುದು ಮತ್ತು ವೈಯಕ್ತಿಕ ಖರ್ಚುಗಳನ್ನು ಟ್ರ್ಯಾಕ್ ಮಾಡುವುದು. ಹಣಕಾಸಿನ ಅರಿವು ಮಾತ್ರವಲ್ಲ ಪ್ರತಿಯೊಬ್ಬರೂ ಆರ್ಥಿಕವಾಗಿ ಸ್ವತಂತ್ರರಾಗಿರುವುದು ಬಹಳ ಮುಖ್ಯ. ನೀವು ಎಷ್ಟು ಬೇಗನೆ ಪ್ರಾರಂಭಿಸುತ್ತೀರೋ ಅಷ್ಟು ಉತ್ತಮವಾದ ಸಂಪತ್ತನ್ನು ಸಂಗ್ರಹಿಸಲು ಮತ್ತು ಶ್ರೀಮಂತರಾಗಲು ಸಾಧ್ಯವಾಗುತ್ತದೆ. ನೀವು ಈಗಾಗಲೇ ನಿಮ್ಮ ಹಣಕಾಸಿನ ಮೇಲೆ ಕೆಲಸ ಮಾಡುತ್ತಿದ್ದೀರಿ. ಆದರೂ ಇದು ಸುಲಭದ ಕೆಲಸವಲ್ಲ. ಕೆಲವೊಮ್ಮೆ ನೀವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೀರಾ ಮತ್ತು ನಿಮ್ಮ ಹಣಕಾಸಿನ ಗುರಿಯನ್ನು ಸಾಧಿಸಲು ಸಹಾಯ ಮಾಡುವ ಸರಿಯಾದ ಸಾಧನಗಳನ್ನು ಆಯ್ಕೆ ಮಾಡುತ್ತಿದ್ದೀರಾ ಎಂದು ನೀವು ಖಚಿತವಾಗಿರುವುದಿಲ್ಲ. ಆದ್ದರಿಂದ ಹೂಡಿಕೆದಾರರಿಗೆ ಕೆಲವು ಸಲಹೆಗಳು ಇಲ್ಲಿವೆ. ನೀವು ಇಂದಿನಿಂದಲೇ ಇವುಗಳನ್ನು ಅನ್ವಯಿಸಿಕೊಳ್ಳಬೇಕು. ಹೂಡಿಕೆದಾರರಿಗೆ ಶ್ರೀಮಂತರಾಗಲು 10 ಸಲಹೆಗಳು ನೀವು ಈಕ್ವಿಟಿ ಹೂಡಿಕೆದಾರರಾಗಿದ್ದರೆ, ಮಾರುಕಟ್ಟೆಯ ಸಮಯವನ್ನು ನಿರ್ಧರಿಸಲು ಪ್ರಯತ್ನಿಸಬೇಡಿ. ಮಾರುಕಟ್ಟೆ ಸಮಯವು ಷೇರು ಮಾರುಕಟ್ಟೆಯ ಭವಿಷ್ಯದ ಚಲನೆಯನ್ನು ಊಹಿಸಲು ಪ್ರಯತ್ನಿಸುವ ಅಭ...

ಚಿನ್ನದ ಸೇಬಿನ ಮರ ಭಾಗ-೧

 ಒಂದಾನೊಂದು ಕಾಲದಲ್ಲಿ ಕುಂತಲಾಪುರ ಎಂಬ ವಿಶಾಲವಾದ ಹಳ್ಳಿ ಆ ಒಂದು ಹಳ್ಳಿಯನ್ನು ರಾಜ ಜಯಚಂದ್ರ ಆಳುತ್ತಿದ್ದನು ಆತನ ತೋಟದಲ್ಲಿ ಚಿನ್ನದ ಸೇಬಿನ ಮರವಿತ್ತು ಆದರೆ ಆ ಸೇಬಿನ ಮರದ ಕಾವಲಿಗಾಗಿ ಸೈನಿಕರನ್ನು ನೇಮಕ ಮಾಡಿದ್ದನು ಮತ್ತು ಬೆಳಗ್ಗೆಯಾಗುವ ಹೊತ್ತಿಗೆ ಚಿನ್ನದ ಸೇಬಿನ ಮರದಲ್ಲಿ ಒಂದು ಹಣ್ಣು ಕಡಿಮೆಯಾಗುತ್ತಿತ್ತು ಇದನ್ನು ಗಮನಿಸಿದ ರಾಜ ಸೇಬನ್ನು ಕದಿಯುತ್ತಿರುವವರು ಯಾರೆಂದು ಚಿಂತಿಸತೊಡಗಿದನು . ಇದನ್ನು ಗಮನಿಸಿದ ಮಂತ್ರಿ ರಾಜನ ಆದೇಶ ಪಡೆದು ತನ್ನ ಮಕ್ಕಳನ್ನು ರಾತ್ರಿ ಸೇಬಿನ ಮರದ ಕಾವಲಿಗಾಗಿ ಬಿಟ್ಟನು (...3...ಜನ ) *ಮೊದಲನೇ ದಿನ :ಮಂತ್ರಿಯ ಮೊದಲನೇ ಮಗನು ಉದಯನು ಅಂದು ರಾತ್ರಿ ಕಾವಲು ಕಾಯತೊಡಗಿದನು. ಆದರೆ ಆತನು ಅಲ್ಪ ಕಾಲದಲ್ಲಿ ನಿದ್ದೆಗೆ  ಜಾರಿದ ಬೆಳಿಗ್ಗೆ ಸೇಬಿನ ಮರದಲ್ಲಿ ಒಂದು ಹಣ್ಣು ಕಾಣೆಯಾಗಿತ್ತು.   *ಎರಡನೆಯ ದಿನ: ಮರುದಿನ ಮಂತ್ರಿಯ ಎರಡನೆಯ ಮಗನಾದ ಶಿವನನ್ನು ನೇಮಕ ಮಾಡಿದ್ದನು ಅವನು ಕೂಡ ರಾತ್ರಿ ಸಮಯದಲ್ಲಿ ನಿದ್ದೆಗೆ ಜಾರಿದ ಸೇಬಿನ ಮರದಲ್ಲಿ ಒಂದು ಹಣ್ಣು ಕಾಣೆಯಾಗಿತ್ತು.  *ಮೂರನೇ ದಿನ: ಮಂತ್ರಿ ತನ್ನ ಮೂರನೇ ಮಗನಾದ ಬುದ್ಧಿಯುಳ್ಳ ಅತ್ಯಂತ ಚುರುಕಾದ ಭೀಮನನ್ನು ರಾತ್ರಿ ಸೇಬುವಿನ ಮರದ ಕಾವಲಿಗೆ ಬಿಟ್ಟನು ಮಧ್ಯರಾತ್ರಿಯ ಸಮಯದಲ್ಲಿ ಉತ್ತರ ದಿಕ್ಕಿನಿಂದ ಬಂದ ಒಂದು ಚಿನ್ನದ ಹಕ್ಕಿಯು ಸೇಬನು ಕೊಂಡೊಯ್ಯುತ್ತಿತ್ತು ಇದನ್ನು ಗಮನಿಸಿದ ಭೀಮನು ಅದಕ್ಕೆ ಬಾಣವನ್ನು ಹೊಡೆದನು ಹಕ್ಕಿಯ...

ಒಂದು ಹಾವಿನ ಕಥೆ

 ಬರಹಗಾರ. ಲಕ್ಷ್ಮಣ ರಾಟಿಮನಿ                     ಒಂದು ರಾತ್ರಿಯಲ್ಲಿ (ಕಮ್ಮಾರ) ಬಡಿಗನ ಅಂಗಡಿಯಲ್ಲಿ ಒಂದು ಹಾವು ಬಂದಿತ್ತು ಅದು ಕತ್ತಲೆಯಲ್ಲಿ ಹರಿದಾಡುತ್ತ ಗರಗಸದ ಹತ್ತಿರ ಸುಳಿಯಿತು, ಗರಗಸದ ಒಂದು ಚೂಪಾದ ಹಲ್ಲು ಹಾವಿನ ಬಾಲಕ್ಕೆ ತಾಗಿತ್ತು ಸ್ವಲ್ಪ ಗಾಯವು ಆಯಿತು ತಕ್ಷಣವೇ ಅದು ತಿರುಗಿ ಗರಗಸವನ್ನು ಕಡೆಯಲು ಪ್ರಯತ್ನಿಸಿತು. ಇದರಿಂದ ಹಾವಿನ ಬಾಯಿಗೆ ಗಾಯವಾಯಿತು ಗಾಯದಿಂದ ವಿಚಲಿತವಾದ ಹಾವು ಕೋಪದಲ್ಲಿ ಏನು ನಡೆಯುತ್ತಿದೆ ಎಂದು ಸರಿಯಾಗಿ ತಿಳಿಯದೆ ಗರಗಸ ತನ್ನನ್ನು ಕಚ್ಚುತ್ತಿದೆ ಎಂದು ಭಾವಿಸಿತು. ಗಗರಗಸವನ್ನು ಉಸಿರುಗಟ್ಟಿಸಿ ಸಾಯಿಸುವ ಉದ್ದೇಶದಿಂದ ಗರಗಸವನ್ನು ಸುತ್ತಿಕೊಳ್ಳಲು ಶುರುಮಾಡಿತು ಗಾಯ ಹೆಚ್ಚಾದಂತೆ ಗರಗಸವನ್ನು ಮತ್ತಷ್ಟು ಶಕ್ತಿಮೀರಿ ಸುತ್ತಿಕೊಂಡಿತ್ತು ಆದರೆ ಮೈಯೆಲ್ಲಾ ಗಾಯವಾಗಿದ್ದು ಹಾವಿಗೆ ಹೊರತು ಗರಗಸಕ್ಕೆ ಏನು ಆಗಲಿಲ್ಲ ಅತಿಯಾದ ರಕ್ತಸ್ರಾವದಿಂದ ಹಾವು ಸತ್ತುಹೋಯಿತು. ನೀತಿ:: ಹೀಗೆ ಒಮ್ಮೊಮ್ಮೆ ನಮಗೆ ತೊಂದರೆ ಮಾಡಿದವರನ್ನು ಶಿಕ್ಷಿಸುವ ಭರದಲ್ಲಿ ನಾವು ಉದ್ವೇಗಕೊಳ್ಳುತ್ತೇವೆ. ಕೋಪದಲ್ಲಿ ಪ್ರತಿಕ್ರಿಯಿಸಿ ಅವರಿಗೆ ಹಾನಿಮಾಡಲು ಪ್ರಯತ್ನಿಸುತ್ತೇವೆ. ಆದರೆ ನಿಜವಾಗಿಯೂ ನಾವು ನಮಗೆ ಶಿಕ್ಷಿಸಿಕೊಂಡಿರುತ್ತೇವೆ ನಮಗಾಗದ ವ್ಯಕ್ತಿಗಳನ್ನು ಕೆಲ ಅಹಿತಕರ ಘಟನೆಗಳನ್ನು ನಿರ್ಲಕ್ಷಿಸುವುದು ಒಳ್ಳೆಯದು ಅಸೂಯೆ ದ್ವೇಷ ಇವಕ್ಕಿಂತ ಪ್ರೀತಿ ಸಹ...