ದಿನಕ್ಕೊಂದು ಕಥೆ
ರಾಮಪುರ ಎಂಬ ಗ್ರಾಮದಲ್ಲಿ ಒಬ್ಬ ರೈತನಿದ್ದ ಆತನ ತೋಟದಲ್ಲಿ ಒಂದು ಸೇಬು ಮರವಿತ್ತು ಅದು ಒಂದು ಸೇಬು ಹಣ್ಣನ್ನು ಬಿಟ್ಟಿತ್ತು ಆ ರೈತನು ತುಂಬಾ ಬಡವನಾಗಿದ್ದನು.
ರೈತನು ಸೇಬು ಹಣ್ಣನ್ನು ಕೊಯ್ದು ಇದನ್ನು ಯಾರಾದರೂ ಪ್ರೀತಿಪಾತ್ರರಿಗೆ ಕೊಡಬೇಕೆಂದು ಯೋಚಿಸಿದನು ಅನಂತರ ಪ್ರಜೆಗಳನ್ನು ಕಾಪಾಡಲು ಹಗಲಿರುಳು ಶ್ರಮಿಸುವ ರಾಜನಿಗೆ ಕೊಡಲು ತೀರ್ಮಾನಿಸಿದನು.
ರಾಜನ ಅರಮನೆಗೆ ಪ್ರವೇಶಿಸಿ ಇದೊಂದು ವಿಶಿಷ್ಟ ಹಣ್ಣು ಎಂದು ಹೇಳಿದನು ಆಗ ರಾಜನು ಹಣ್ಣನ್ನು ತೆಗೆದುಕೊಂಡು ನೋಡಿದಾಗ ಅವನಿಗೆ ವಿಶಿಷ್ಟ ಅನಿಸಲಿಲ್ಲ ಆದರೆ ಬಡವನಾಗಿದ್ದ ರೈತನ ಮುಗ್ಧತೆಯನ್ನು ನೋಡಿ ಅವನಿಗೆ ಒಂದು ಕುದುರೆ ಮತ್ತು ಒಂದು ಚೀಲ ಬಂಗಾರದ ನಾಣ್ಯಗಳನ್ನು ಕೊಟ್ಟನು.
ರೈತನು ಕುದುರೆ ಮತ್ತು ನಾಣ್ಯಗಳನ್ನು ತೆಗೆದುಕೊಂಡು ಮನೆಗೆ ಬಂದನು ಆದರೆ ಅವನ ಮನೆಯ ಪಕ್ಕದಲ್ಲಿದ್ದ ಶ್ರೀಮಂತನೊಬ್ಬನು ರೈತನನ್ನು ಕೇಳಿದನು ಕುದುರೆ ಮತ್ತು ಬಂಗಾರದ ನಾಣ್ಯಗಳು ನಿನಗೆ ಹೇಗೆ ಬಂದವು ಎಂದು ಕೇಳಿದಾಗ ರೈತನು ನಡೆದ ವಿಷಯವನ್ನು ತಿಳಿಸಿದನು.
ಆಗ ಶ್ರೀಮಂತನು ತನ್ನ ಹೊಲದಲ್ಲಿದ್ದ ಬಗೆಬಗೆಯ ಸೇಬು ಹಣ್ಣುಗಳನ್ನು ಕೊಯ್ದು ಒಂದು ಗಾಡಿಯಲ್ಲಿ ತುಂಬಿಕೊಂಡು ರಾಜನ ಅರಮನೆಗೆ ಹೋದನು ರಾಜನಿಗೆ ಹಣ್ಣುಗಳನ್ನು ಕೊಟ್ಟುನು ಆಗ ರಾಜನು ತುಂಬಾ ಸಂತೋಷ ವಾದನು.
ರಾಜನು ನಿನಗೇನು ಬೇಕು ಕೇಳು ಎಂದು ಹೇಳಿದಾಗ ಶ್ರೀಮಂತನು ನನಗೇನು ಬೇಡ ಎಂದು ನಾಟಕವಾಡಿದ ಆಗ ರಾಜನು ಪ್ರತಿಫಲ ಬಯಸದ ಪ್ರಜೆಗಳಿಂದ ನಾ ಏನು ಸ್ವೀಕರಿಸುವುದಿಲ್ಲ ಎಂದಾಗ ಆಗ ಶ್ರೀಮಂತನು ಮನಸ್ಸಿನಲ್ಲೇ ಸಂತೋಷ ಪಟ್ಟು ನೀವು ಏನು ಕೊಟ್ಟರೆ ತೆಗೆದುಕೊಳ್ಳುವೆ ಎಂದನು.
ರಾಜ ಇವನು ಗಾಡಿಯಲ್ಲಿ ಸೇಬುಹಣ್ಣುನು ತಂದಿರುವನು ಇವನು ಬಡವನಲ್ಲ ಕೈಬೆರಳುಗಳಲ್ಲಿ ಬಂಗಾರದ ಉಂಗುರಗಳಿವೆ ಇವನು ದುಡಿಯುವವನಲ್ಲ ತಿಳಿದು.
ಬಡ ರೈತ ಕೊಟ್ಟಿರುವ ಸೇಬುಹಣ್ಣನ್ನು ಶ್ರೀಮಂತನ ಕೈಗೆ ಕೊಟ್ಟು ಹೇಳಿದನು ಇದು ನಿಜವಾದ ಶ್ರಮದಫಲ ಇದಕ್ಕೆ ಬೆಲೆಕಟ್ಟಲಾಗದು ಎಂದು ಹೇಳಿ ಕಳುಹಿಸಿದನು ಆಗ ಶ್ರೀಮಂತನು ಅರಮನೆಯಿಂದ ಹೊರಗೆ ನಡೆದನು
Comments
Post a Comment