ಚಿನ್ನದ ಸೇಬಿನ ಮರ ಭಾಗ-೧
ಒಂದಾನೊಂದು ಕಾಲದಲ್ಲಿ ಕುಂತಲಾಪುರ ಎಂಬ ವಿಶಾಲವಾದ ಹಳ್ಳಿ ಆ ಒಂದು ಹಳ್ಳಿಯನ್ನು ರಾಜ ಜಯಚಂದ್ರ ಆಳುತ್ತಿದ್ದನು ಆತನ ತೋಟದಲ್ಲಿ ಚಿನ್ನದ ಸೇಬಿನ ಮರವಿತ್ತು ಆದರೆ ಆ ಸೇಬಿನ ಮರದ ಕಾವಲಿಗಾಗಿ ಸೈನಿಕರನ್ನು ನೇಮಕ ಮಾಡಿದ್ದನು ಮತ್ತು ಬೆಳಗ್ಗೆಯಾಗುವ ಹೊತ್ತಿಗೆ ಚಿನ್ನದ ಸೇಬಿನ ಮರದಲ್ಲಿ ಒಂದು ಹಣ್ಣು ಕಡಿಮೆಯಾಗುತ್ತಿತ್ತು ಇದನ್ನು ಗಮನಿಸಿದ ರಾಜ ಸೇಬನ್ನು ಕದಿಯುತ್ತಿರುವವರು ಯಾರೆಂದು ಚಿಂತಿಸತೊಡಗಿದನು .
ಇದನ್ನು ಗಮನಿಸಿದ ಮಂತ್ರಿ ರಾಜನ ಆದೇಶ ಪಡೆದು ತನ್ನ ಮಕ್ಕಳನ್ನು ರಾತ್ರಿ ಸೇಬಿನ ಮರದ ಕಾವಲಿಗಾಗಿ ಬಿಟ್ಟನು (...3...ಜನ )
*ಮೊದಲನೇ ದಿನ :ಮಂತ್ರಿಯ ಮೊದಲನೇ ಮಗನು ಉದಯನು ಅಂದು ರಾತ್ರಿ ಕಾವಲು ಕಾಯತೊಡಗಿದನು. ಆದರೆ ಆತನು ಅಲ್ಪ ಕಾಲದಲ್ಲಿ ನಿದ್ದೆಗೆ ಜಾರಿದ ಬೆಳಿಗ್ಗೆ ಸೇಬಿನ ಮರದಲ್ಲಿ ಒಂದು ಹಣ್ಣು ಕಾಣೆಯಾಗಿತ್ತು.
*ಎರಡನೆಯ ದಿನ: ಮರುದಿನ ಮಂತ್ರಿಯ ಎರಡನೆಯ ಮಗನಾದ ಶಿವನನ್ನು ನೇಮಕ ಮಾಡಿದ್ದನು ಅವನು ಕೂಡ ರಾತ್ರಿ ಸಮಯದಲ್ಲಿ ನಿದ್ದೆಗೆ ಜಾರಿದ ಸೇಬಿನ ಮರದಲ್ಲಿ ಒಂದು ಹಣ್ಣು ಕಾಣೆಯಾಗಿತ್ತು.
ಮುಂದುವರೆಯುವುದು
Comments
Post a Comment